ಮಂಜೊಟ್ಟಿದ ಮರದ ಕಾಯಿಗೆ ಮಂಜೊಟ್ಟಿ ಕಾಯಿ ಎನ್ನುತ್ತಾರೆ ಮಂಜೊಟ್ಟಿ ಮರವು ಬೇಗ ಬೆಳೆಯುತ್ತದೆ. ಅದರಲ್ಲಿ ಆಗುವ ಕೋಡಿನ ಒಳಗಿನ ಬೀಜಗಳು ಬಹಳ ವಿಶೇಷ . ಮರದಲ್ಲಿ ಕೋಡು ಬೆಳೆದು ಒಡೆಯುವಾಗ ಬೀಜಗಳು ನೆಲಕ್ಕೆ ಬಿದ್ದು ಸಿಗುತ್ತದೆ.ಅದನ್ನು ಚೆನ್ನೆಮಣೆಯಲ್ಲಿ ಆಡಲು ಉಪಯೋಗಿಸುವ ಕಾರಣ ಚೆನ್ನೆಕಾಯಿ ಎಂದು ಹೆಸರು ಬಂತು == ಮಂಜೊಟ್ಟಿಕಾಯಿಯ ಬೇರೆ ಬೇರೆ ಹೆಸರು == ಕನ್ನಡ-ಚೆನ್ನೆಕಾಯಿ,ದೊಡ್ಡಗುಲಗುಂಜಿ ಇಂಗ್ಲೀಷ್-ರೆಡ್ಡ್ ಲಕ್ಕಿ ಸೀಡ್ಸ್ ಮಲಯಾಳ- ಮಂಜಾಡಿ ತುಳು-ಮಂಜಟ್ಟಿಕಾಯಿ == ಪರಿಚಯ == ಮಂಜಟ್ಟಿ ಕಾಯಿಯ ಕೋಡು ಬೆಳೆದು ಒಣಗಿ ಒಡೆದಾಗ ಒಳಗೆ ಕೆಂಪಾದ ಕಾಯಿಯು ಸಿಗುತ್ತದೆ.ಈ ಕೆಂಪಾದ ಕಾಯಿಯು ಉರುಟಾಗಿ ಮದ್ಯಭಾಗದಲ್ಲಿ ಉಬ್ಬಿಕೊಂಡಿರುತ್ತದೆ.ಈ ಕಾಯಿಗಳು ವಿಷಪೂರಿತವಾಗಿದ್ದು ನೇರವಾಗಿ ಆಹಾರದಲ್ಲಿ ಬಳಸುವಂತಿಲ್ಲ.ಇದನ್ನು ಜಾಸ್ತಿಯಾಗಿ ಚೆನ್ನೆಮಣೆ ಆಡಲು ಉಪಯೋಗಿಸುತ್ತಾರೆ == ನಂಬಿಕೆ == ಸಣ್ಣ ಮಕ್ಕಳು ಬಹಳ ಹಠವಾದಿ ಸ್ವಭಾವದವರಾಗಿದ್ದರೆ ಅವರನ್ನು ಗುರುವಾಯೂರು ದೇವಸ್ಥಾನದ ದ್ವಾರದ ಮುಂಭಾಗದಲ್ಲಿ ಇಟ್ಟಿರುವ ಮಂಜಟ್ಟಿ ಕಾಯಿಗಳಲ್ಲಿ ಆಟ ಆಡಿಸಿದರೆ ಅವರ ಹಠ ಸ್ವಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ .ಈ ಸೇವೆಯು ಇಂದಿಗೂ ದೇವರಿಗೆ ಒಂದು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ == ಉಪಯೋಗಗಳು == ಈ ಕಾಯಿಗಳು ಬಹಳ ಕೆಂಪಾಗಿ ಆಕರ್ಷಣೀಯವಾಗಿರುವುದರಿಂದ ಕರಕುಶಲ ವಸ್ತುಗಳ ತಯಾರಿಯಲ್ಲಿ ಹಾಗೂ ಅಲಂಕಾರಿಕ ವಸ್ತುಗಳಲ್ಲಿಯು ಉಪಯೋಗಿಸುತ್ತಾರೆ == ಉಲ್ಲೇಖ ==